Saala: ರಾಜ್ಯದ ಎಲ್ಲ ಮಹಿಳೆಯರ ಸಂಘಗಳ ಸಾಲ ಮನ್ನಾ ಮಾಡುವುದಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್!
Saala: ಗ್ರಾಮೀಣ ಭಾಗದ ಬಹುಪಾಲು ಜನರು ಕೃಷಿಯನ್ನೇ ಅವಲಂಬಿಸಿ ಬದುಕನ್ನು ನಡೆಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು ಕೃಷಿ ಕೆಲಸ, ಪಶುಸಂಗೋಪನೆ, ಹೈನುಗಾರಿಕೆ, ಸಣ್ಣ ವ್ಯಾಪಾರ, ಗೃಹ ಕೈಗಾರಿಕೆ ಮೂಲಕ ಜೀವನ ನಡೆಸುತ್ತಿದ್ದಾರೆ. ಆದರೆ ಮಳೆ ಕೊರತೆ, ಬರಗಾಲ, ಬೆಳೆ ನಷ್ಟ ಮತ್ತು ಉದ್ಯೋಗದ ಕೊರತೆಯಿಂದಾಗಿ ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಸ್ವಸಹಾಯ ಸಂಘ, ಸ್ತ್ರೀ ಶಕ್ತಿ ಸಂಘ ಸೇರಿದಂತೆ ಇನ್ನಿತರೇ ಸಂಘಗಳಲ್ಲಿ ಸಾಲ ಪಡೆದುಕೊಂಡಿರುವ ಮಹಿಳೆಯರು ಸಾಲವನ್ನು ಮರುಪಾವತಿಸಲು ಬಹಳಷ್ಟು ಕಷ್ಟ ಪಡುತ್ತಿದ್ದಾರೆ.
ಆದ್ದರಿಂದ ಬರಪೀಡಿತ ಪ್ರದೇಶಗಳಲ್ಲಿ ಉದ್ಯೋಗವಿಲ್ಲದೆ ಜೀವನ ನಡೆಸುತ್ತಿರುವ ಮಹಿಳೆಯರಿಗೆ ಸಾಲ ಮರುಪಾವತಿಸುವಂತೆ ಒತ್ತಾಯಿಸಬಾರದು. ಅವರ ಸಂಕಷ್ಟವನ್ನು ಅರ್ಥಮಾಡಿಕೊಂಡು ಸಾಲ ಮರುಪಾವತಿಗೆ ಸೂಕ್ತ ಕಾಲಾವಕಾಶ ನೀಡಬೇಕೆಂದು ಸರ್ಕಾರವು ನಿರ್ಧರಿಸಿದ್ದು, ಈ ಒಂದು ವ್ಯವಸ್ಥೆ ಜಾರಿಗೊಂಡರೆ ಬರಪೀಡಿತ ಪ್ರದೇಶದ ಮಹಿಳೆಯರಿಗೆ ಸಾಲ ಮರುಪಾವತಿಸಲು ಕಾಲಾವಕಾಶ ಸಿಗಲಿದೆ. ಇದರಿಂದ ಆರ್ಥಿಕ ಒತ್ತಡಕ್ಕೆ ಸಿಲುಕುವ ಅಗತ್ಯ ಇರುವುದಿಲ್ಲ.
ಪ್ರಸ್ತುತ ಲೇಖನದಲ್ಲಿ ಬರಗಾಲದಿಂದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳೇನು? ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸುವುದರಿಂದ ಮಹಿಳೆಯರಿಗಾಗುವ ಪ್ರಯೋಜನಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಪ್ರಮುಖ ಹೈಲೈಟ್ ಪಾಯಿಂಟ್ಸ್:
| * ಬರಪೀಡಿತ ಪ್ರದೇಶಗಳ ಮಹಿಳೆಯರ ಪರಿಸ್ಥಿತಿಯನ್ನು ಪರಿಗಣಿಸಿ ಸಾಲ ಮರುಪಾವತಿಗೆ ಸೂಕ್ತ ಕಾಲಾವಕಾಶ ನೀಡುವಂತೆ ಸರ್ಕಾರ ಮನವಿ ಸಲ್ಲಿಸಿದೆ. * ಆದಾಯವಿಲ್ಲದ ಸಂದರ್ಭದಲ್ಲಿಯೂ ಕಂತು ಪಾವತಿಸಬೇಕಾದ ಒತ್ತಡದಿಂದ ಮಹಿಳೆಯರಿಗೆ ಆರ್ಥಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿಯಲ್ಲಿ ಈ ಒಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ. * ಅರ್ಹ ಮಹಿಳೆಯರಿಗೆ ನಿಯಮಾನುಸಾರ ಸಾಲದ ಕಂತು ಮುಂದೂಡಿಕೆ ಅಥವಾ ಮರುಪಾವತಿ ಅವಧಿ ವಿಸ್ತರಣೆಗೆ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. |
ಬರಗಾಲದಿಂದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳೇನು?
- ಕೃಷಿ ಚಟುವಟಿಕೆಗಳು ಕುಂಠಿತಗೊಳ್ಳುವುದರಿಂದ ಕೃಷಿ ಕೂಲಿ ಕೆಲಸ ಸಿಗದೆ ಆದಾಯ ಕಡಿಮೆಯಾಗುತ್ತದೆ. ಇದರಿಂದಾಗಿ ಮಹಿಳೆಯರು ಸ್ವಸಹಾಯ ಸಂಘ, ಸ್ತ್ರೀ ಶಕ್ತಿ ಸಂಘ ಸೇರಿದಂತೆ ಇನ್ನಿತರ ಸಂಘಗಳಿಂದ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ.
- ಬರಪೀಡಿತ ಪ್ರದೇಶವೆಂದು ಘೋಷಣೆಯಾದ ಹಿನ್ನಲೆಯಲ್ಲಿ ಅನೇಕ ಬಡ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಜನರು ಉದ್ಯೋಗವಿಲ್ಲದೆ ಖಾಲಿ ಕುಳಿತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಮಾಡುವುದು ಕೂಡ ಬಹಳಷ್ಟು ಕಷ್ಟಕರವಾಗಿದೆ.
- ನಿರಂತರ ಆದಾಯವಿಲ್ಲದ ಕಾರಣ ಮಹಿಳೆಯರು ತಮ್ಮ ಉದ್ಯಮಗಳನ್ನು ವಿಸ್ತರಿಸಲು ಅಥವಾ ಹೊಸ ಉದ್ಯೋಗ ಆರಂಭಿಸಲು ಸಾಧ್ಯವಾಗುವುದಿಲ್ಲ.
ಮಹಿಳೆಯರ ಮೇಲಿನ ಸಾಲದ ಒತ್ತಡ:
ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಗಳು ಹಾಗೂ ಇತರ ಮಹಿಳಾ ಸಂಘಟನೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಈ ಸಂಘಗಳ ಮೂಲಕ ಮಹಿಳೆಯರು ಉಳಿತಾಯ ಮಾಡುವುದರ ಜೊತೆಗೆ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸಣ್ಣಪುಟ್ಟ ಉದ್ಯಮಗಳನ್ನು ಆರಂಭಿಸುತ್ತಾರೆ. ಮಕ್ಕಳ ಶಿಕ್ಷಣ, ಕುಟುಂಬದ ಆರೋಗ್ಯ, ಮನೆ ನಿರ್ವಹಣೆ, ಹೈನುಗಾರಿಕೆ, ಕುರಿ ಸಾಕಣೆ ಹಾಗೂ ಸಣ್ಣ ವ್ಯಾಪಾರಗಳಿಗಾಗಿ ಅನೇಕ ಮಹಿಳೆಯರು ಈ ಎಲ್ಲ ಸಂಘಗಳಲ್ಲಿ ಸಾಲವನ್ನು ಪಡೆದುಕೊಳ್ಳುತ್ತಾರೆ. ಆದರೆ ಬರಗಾಲದಿಂದಾಗಿ ಅವರ ಆದಾಯದ ಮೂಲಗಳು ಸ್ಥಗಿತಗೊಂಡಾಗ, ಪಡೆದ ಸಾಲವನ್ನು ಮರುಪಾವತಿಸುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ.
ಮಹಿಳೆಯರು ಎದುರಿಸುವ ಪ್ರಮುಖ ಸವಾಲುಗಳು:
- ಬರಗಾಲದ ಪರಿಣಾಮವಾಗಿ ಕೃಷಿ ಕೆಲಸಗಳು ಕಡಿಮೆಯಾಗಿ, ಗ್ರಾಮೀಣ ಮಹಿಳೆಯರಿಗೆ ನಿರಂತರ ಉದ್ಯೋಗ ದೊರೆಯುತ್ತಿಲ್ಲ. ಇದರಿಂದ ಆದಾಯವಿಲ್ಲದೆ ಕುಟುಂಬದ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಸ್ವಸಹಾಯ ಸಂಘಗಳಲ್ಲಿ ಪಡೆದ ಸಾಲದ ಕಂತುಗಳನ್ನು ಪಾವತಿಸುವುದು ಕಷ್ಟಕರವಾಗಿದೆ.
- ಪಡೆದ ಸಾಲದ ಕಂತುಗಳನ್ನು ಪಾವತಿಸಲು ಆದಾಯವಿಲ್ಲದ ಸಂದರ್ಭದಲ್ಲಿ ಕೆಲ ಮಹಿಳೆಯರು ಬೇರೆ ಮೂಲಗಳಿಂದ ಸಾಲ ಪಡೆಯುವ ಅನಿವಾರ್ಯತೆಗೆ ಸಿಲುಕುತ್ತಾರೆ. ಇದರಿಂದ ಸಾಲದ ಮೊತ್ತ ಮತ್ತು ಬಡ್ಡಿಯ ಹೊರೆ ಹೆಚ್ಚಾಗಿ, ಸಾಲದಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿರುತ್ತದೆ.
- ನಿಗದಿತ ಸಮಯಕ್ಕೆ ಸಾಲದ ಕಂತುಗಳನ್ನು ಪಾವತಿಸಲು ಸಾಧ್ಯವಾಗದ ಮಹಿಳೆಯರು ಸಾಲ ವಸೂಲಾತಿಯ ಒತ್ತಡವನ್ನು ಎದುರಿಸುವಂತಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಇಂತಹ ಒತ್ತಡವು ಮಾನಸಿಕ ನೆಮ್ಮದಿಯನ್ನು ಕಸಿದುಕೊಳ್ಳುವುದರ ಜೊತೆಗೆ ಕುಟುಂಬದ ದೈನಂದಿನ ಜೀವನದ ಮೇಲೂ ಪರಿಣಾಮ ಬೀರುತ್ತಿದೆ.
ಮಹಿಳೆಯರ ಸಾಲದ ಹೊರೆ ಕಡಿಮೆ ಮಾಡಲು ಅಗತ್ಯ ಕ್ರಮಗಳು:
- ಬರಗಾಲದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಅರ್ಹ ಮಹಿಳೆಯರ ಪರಿಸ್ಥಿತಿಯನ್ನು ಪರಿಶೀಲಿಸಿ, ಸಾಲದ ಕಂತು ಪಾವತಿಗೆ ತಾತ್ಕಾಲಿಕ ವಿನಾಯಿತಿ ನೀಡಬೇಕು. ಇದರಿಂದಾಗಿ ಮಹಿಳೆಯರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.
- ಮಹಿಳೆಯರ ಹಾಗೂ ಅವರ ಕುಟುಂಬದವರ ಆರ್ಥಿಕ ಪರಿಸ್ಥಿತಿ ಸುಧಾರಿಸುವವರೆಗೆ ಸಾಲದ ಕಂತುಗಳನ್ನು ವಿಸ್ತರಿಸಿ, ಸಾಲ ಮರುಪಾವತಿಗೆ ಹೆಚ್ಚುವರಿ ಸಮಯವನ್ನು ನೀಡುವುದು.
- ಸ್ವಸಹಾಯ ಸಂಘಗಳ, ಅಥವಾ ಸ್ತ್ರೀ ಶಕ್ತಿ ಸಂಘಗಳ ಅಥವಾ ಯಾವುದೇ ಸಂಘಗಳ ಏಜೆನ್ಟ್ ಗಳು ಮಹಿಳೆಯರಿಗೆ ಸಾಲ ಮರುಪಾವತಿಸುವಂತೆ ಒತ್ತಾಯ ಮಾಡಬಾರದು. ಬಲವಂತವಾಗಿ ಸಾಲ ವಸೂಲಿ ಮಾಡದಂತೆ ನೋಡಿಕೊಳ್ಳಬೇಕು.
ಸಾಲ ಮರುಪಾವತಿಯ ಅವಧಿ ವಿಸ್ತರಿಸುವುದರಿಂದ ಮಹಿಳೆಯರಿಗಾಗುವ ಪ್ರಯೋಜನಗಳು:
- ಸಾಲದ ಕಂತುಗಳನ್ನು ತಕ್ಷಣ ಪಾವತಿಸಬೇಕಾದ ಒತ್ತಡ ಕಡಿಮೆಯಾಗಿ, ಮಹಿಳೆಯರು ತಮ್ಮ ಕುಟುಂಬದ ದೈನಂದಿನ ಖರ್ಚುಗಳನ್ನು ನಿಭಾಯಿಸಲು ಅನುಕೂಲವಾಗುತ್ತದೆ.
- ಸಾಲ ಮರುಪಾವತಿ ಮಾಡುವ ಒತ್ತಡ ಇಲ್ಲದಿದ್ದಾಗ ಮಹಿಳೆಯರಿಗೆ ಆಹಾರ, ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಹಣವನ್ನು ಹೊಂದಿಸಿಕೊಳ್ಳಲು ಹೆಚ್ಚಿನ ಅವಕಾಶ ದೊರೆಯುತ್ತದೆ
- ಮಹಿಳೆಯರಿಗೆ ಸಾಲ ಮರುಪಾವತಿಯ ಆತಂಕ ಕಡಿಮೆಯಾಗಿ, ಮಹಿಳೆಯರು ಮಾನಸಿಕ ಒತ್ತಡದಿಂದ ಸ್ವಲ್ಪಮಟ್ಟಿಗೆ ಹೊರಬರಲು ಸಹಾಯವಾಗುತ್ತದೆ.
- ಒಂದು ಸಂಘದಿಂದ ಪಡೆದ ಸಾಲವನ್ನು ಮರುಪಾವತಿಸಲು ಇನ್ನೊಂದು ಸಂಘದಿಂದ ಸಾಲ ಪಡೆದುಕೊಳ್ಳುವ ಅನಿವಾರ್ಯತೆ ಕಡಿಮೆಯಾಗುತ್ತದೆ. ಇದರಿಂದಾಗಿ ಸಾಲದ ಹೊರೆ ಹೆಚ್ಚಾಗುವುದು ಕಡಿಮೆಯಾಗುತ್ತದೆ.
ಅಂತಿಮ ತೀರ್ಮಾನ:
ಸರ್ಕಾರವು ಬರಪೀಡಿತ ಪ್ರದೇಶಗಳಲ್ಲಿನ ಹಾಗೂ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಹೊರೆಯನ್ನು, ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹಿಳೆಯರು ಸ್ವ ಸಹಾಯ ಸಂಘಗಳಿಂದ, ಸ್ತ್ರೀ ಶಕ್ತಿ ಸಂಘಗಳಿಂದ ಹಾಗೂ ಇನ್ನಿತರ ಸಂಘಗಳಿಂದ ಪಡೆದ ಸಾಲವನ್ನು ಮಾರುವತಿಸುವ ಅವಧಿಯನ್ನು ವಿಸ್ತರಿಸುವ ಅಥವಾ ತಾತ್ಕಾಲಿಕ ವಿನಾಯಿತಿ ನೀಡುವ ಗಿರಿಯನ್ನು ಹೊಂದಿದ್ದು, ಈ ಒಂದು ವ್ಯವಸ್ಥೆಯನ್ನು ಸರ್ಕಾರವು ಅಧಿಕೃತವಾಗಿ ಜಾರಿಗೊಳಿಸಿದರೆ, ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಹೊರೆಯು ಕಡಿಮೆಯಾಗುವುದರ ಜೊತೆಗೆ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ. ಜೊತೆಗೆ ಸಾಲ ಮರುಪಾವತಿಸಲು ಒಟ್ಟುಗೂಡಿಸಬೇಕಾದ ಹಣವನ್ನು ಮನೆಯ ನಿರ್ವಹಣೆಗೆ ಬಳಸಿಕೊಳ್ಳಬಹುದು.