October 24, 2026

ECHS Recruitment 2026: Salary Up to ₹95,000! Clerk, Driver & Peon Vacancies in Bengaluru – No Application Fee, Apply by November 2!

ಜಸ್ಟ್, 8 ನೇ ತರಗತಿ, 10 ನೇ ತರಗತಿ ಪೂರ್ಣಗೊಳಿಸಿ ಉದ್ಯೋಗಾವನ್ನು ಹುಡುಕುತ್ತಿರುವ ನಿರುದ್ಯೋಗಿ ಯುವಕ- ಯುವತಿಯರಿಗೆ ಭರ್ಜರಿ ಉದ್ಯೋಗ ಅವಕಾಶ! ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಮಾಜಿ ಸೈನಿಕ ಕೊಡುಗೆ ಆರೋಗ್ಯ ಯೋಜನೆಯು ಪ್ರಾದೇಶಿಕ ಕೇಂದ್ರ ಬೆಂಗಳೂರಿನ ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಈ ಒಂದು ನೇಮಕಾತಿಯು ಸಂಪೂರ್ಣ ಒಪ್ಪಂದದ ಆಧಾರ ಮೇಲೆ ನಡೆಯಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಒಂದು ನೇಮಕಾತಿಯಡಿಯಲ್ಲಿ ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್, ಚಾಲಕ, ಪ್ಯೂನ್, ನರ್ಸಿಂಗ್ ಅಸಿಸ್ಟೆಂಟ್, ಫಾರ್ಮಸಿಸ್ಟ್, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು 35 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ 8th, 10th, ಡಿಗ್ರಿ, ಡಿಫಾರ್ಮ, ಬಿಫಾರ್ಮ ಸೇರಿದಂತೆ ಇನ್ನಿತರ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ, ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ರೂ. 21,800/- ದಿಂದ ರೂ. 95,000/- ವರೆಗೆ ಅತ್ಯಾಕರ್ಷಕ ವೇತನವನ್ನು ನೀಡಲಾಗುತ್ತದೆ.

ಹುದ್ದೆಯ ಅವಲೋಕನ:

ನೇಮಕಾತಿ ಸಂಸ್ಥೆಯ ಹೆಸರು ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ
ಹುದ್ದೆಯ ಹೆಸರು ಮೆಡಿಕಲ್ ಆಫೀಸರ್, ಡೆಂಟಲ್ ಆಫೀಸರ್, ಲ್ಯಾಬ್ ಟೆಕ್ನಿಷಿಯನ್, ನರ್ಸಿಂಗ್ ಅಸಿಸ್ಟೆಂಟ್, ಕ್ಲರ್ಕ್, ಚಾಲಕ, ಪ್ಯೂನ್ ಹಾಗೂ ಇತರೆ ಹುದ್ದೆಗಳು
ಹುದ್ದೆಗಳ ಸಂಖ್ಯೆ 35 ಹುದ್ದೆಗಳು
ಉದ್ಯೋಗ ಸ್ಥಳ ಬೆಂಗಳೂರು – ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02-11-2026
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್

ಹುದ್ದೆಯ ಸಂಕ್ಷಿಪ್ತ ವಿವರ:

ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಬೆಂಗಳೂರಿನ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ ಈ ಕೆಳಕಂಡಂತಿದೆ.

ಹುದ್ದೆಗಳ ವಿವರ ಹುದ್ದೆಗಳ ಸಂಖ್ಯೆ
ನರ್ಸಿಂಗ್ ಅಸಿಸ್ಟೆಂಟ್ 1 ಹುದ್ದೆ
ಡೆಂಟಲ್ ಆಫೀಸರ್ 1 ಹುದ್ದೆ
ಚಾಲಕರು 2 ಹುದ್ದೆಗಳು
ಕ್ಲರ್ಕ್ 3 ಹುದ್ದೆಗಳು
ಫೀಮೇಲ್ ಅಟೆಂಡೆಂಟ್ 3 ಹುದ್ದೆಗಳು
ಮೆಡಿಕಲ್ ಆಫೀಸರ್ 4 ಹುದ್ದೆಗಳು
ಲ್ಯಾಬ್ ಟೆಕ್ನಿಷಿಯನ್ 4 ಹುದ್ದೆಗಳು
ಡೆಂಟಲ್ ಹೈಜಿನಿಸ್ಟ್ 4 ಹುದ್ದೆಗಳು
ಫಾರ್ಮಸಿಸ್ಟ್ 5 ಹುದ್ದೆಗಳು
ಪ್ಯೂನ್/ ಚೌಕಿದಾರ್/ ಸಫಾಯಿವಾಲಾ 8 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಹುದ್ದೆಗಳ ವಿವರ ಶೈಕ್ಷಣಿಕ ಅರ್ಹತೆ
ನರ್ಸಿಂಗ್ ಅಸಿಸ್ಟೆಂಟ್ ಜಿಎನ್ಎಂ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಹಾಗೂ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು.
ಡೆಂಟಲ್ ಆಫೀಸರ್ ಬಿಡಿಎಸ್ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕನಿಷ್ಠ 3 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
ಚಾಲಕರು 8 ನೇ ತರಗತಿಯಲ್ಲಿ ಪಾಸ್ ಆಗಿರಬೇಕು ಹಾಗೂ ಚಾಲನಾ ಪರವಾನಗಿ ಹೊಂದಿರಬೇಕು ಜೊತೆಗೆ ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು
ಕ್ಲರ್ಕ್ ಯಾವುದೇ ಪದವಿ ಪೂರ್ಣಗೊಳಿಸಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು ಜೊತೆಗೆ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು
ಫೀಮೇಲ್ ಅಟೆಂಡೆಂಟ್ ಸಾಕ್ಷರತೆ, ಸೇನಾ ಆರೋಗ್ಯ ಸಂಸ್ಥೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು
ಮೆಡಿಕಲ್ ಆಫೀಸರ್ MBBS ವಿದ್ಯಾರ್ಹತೆಯೊಂದಿಗೆ ಕನಿಷ್ಠ ಮೂರು ವರ್ಷಗಳ ಇಂಟರ್ನ್ಶಿಪ್
ಲ್ಯಾಬ್ ಟೆಕ್ನಿಷಿಯನ್ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಅಥವಾ DMLT ಪೂರ್ಣಗೊಳಿಸಿರಬೇಕು ಜೊತೆಗೆ ವೈದ್ಯಕೀಯ ಪ್ರಯೋಗಾಲಯದಲ್ಲಿ ಪ್ರಯೋಗಾಲಯ ಸಹಾಯಕರಾಗಿ ಕನಿಷ್ಠ 3 ವರ್ಷಗಳ ಅನುಭವವನ್ನು ಹೊಂದಿರಬೇಕು.
ಡೆಂಟಲ್ ಹೈಜಿನಿಸ್ಟ್ ದಂತ ನೈರ್ಮಲ್ಯ ಕೋರ್ಸ್ ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಹಾಗೂ ದಂತ ಪ್ರಯೋಗಾಲಯದಲ್ಲಿ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು.
ಫಾರ್ಮಸಿಸ್ಟ್ ಬಿಫಾಮ್ ಅಥವಾ ಡಿಫಾರ್ಮ ವಿದ್ಯಾರ್ಹತೆ ಹೊಂದಿರಬೇಕು, ಫಾರ್ಮಸಿ ಕಾಯ್ದೆಯಡಿಯಲ್ಲಿ ಫಾರ್ಮಸಿಸ್ಟ್ ಗಳಾಗಿ ನೋಂದಣಿ ಆಗಿರಬೇಕು ಜೊತೆಗೆ ಕನಿಷ್ಠ ಮೂರು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
ಪ್ಯೂನ್, ಚೌಕಿದಾರ್, ಸಫಾಯಿವಾಲಾ 8 ನೇ ತರಗತಿಯಲ್ಲಿ ಪಾಸ್ ಆಗಿರಬೇಕು ಜೊತೆಗೆ ಕನಿಷ್ಠ 5 ವಷಗಳ ಅನುಭವ ಹೊಂದಿರಬೇಕು

ವಯೋಮಿತಿ ವಿವರ:

  • ಕ್ಲರ್ಕ್, ಡ್ರೈವರ್, ಫೀಮೇಲ್ ಅಟೆಂಡೆಂಟ್, ಪಿಯೋನ್, ಚೌಕಿದಾರ್, ಸಫಾಯಿವಾಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 53 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಲ್ಯಾಬ್ ಅಸಿಸ್ಟೆಂಟ್, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್, ನರ್ಸಿಂಗ್ ಅಸಿಸ್ಟೆಂಟ್, ಡೆಂಟಲ್ ಹೈಜಿನಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 56 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಡೆಂಟಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 63 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಲ್ ಗರಿಷ್ಟ 66 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ:

ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆಯಡಿಯಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ. ಹಾಗಾಗಿ ಅಭ್ಯರ್ಥಿಗಳು ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿ:

ಹುದ್ದೆಗಳ ವಿವರ ವೇತರನ ಶ್ರೇಣಿ
ಫೀಮೇಲ್ ಅಟೆಂಡೆಂಟ್ ರೂ. 21,800/-
ಪಿಯೋನ್ ರೂ. 21,800/-
ಚೌಕಿದಾರ್ ರೂ. 21,800/-
ಸಫಾಯಿವಾಲಾ ರೂ. 21,800/-
ಡ್ರೈವರ್ ರೂ. 25,600/-
ಕ್ಲರ್ಕ್ ರೂ. 29,200/-
ಲ್ಯಾಬ್ ಟೆಕ್ನಿಷಿಯನ್ ರೂ. 36,500/-
ಡೆಂಟಲ್ ಹೈಜಿನಿಸ್ಟ್ ರೂ. 36,500/-
ಫಾರ್ಮಸಿಸ್ಟ್ ರೂ. 36,500/-
ಲ್ಯಾಬ್ ಅಸಿಸ್ಟೆಂಟ್ ರೂ. 36,500/-
ನರ್ಸಿಂಗ್ ಅಸಿಸ್ಟೆಂಟ್ ರೂ. 36,500/-
ಡೆಂಟಲ್ ಆಫೀಸರ್ ರೂ. 95,000/-
ಮೆಡಿಕಲ್ ಆಫೀಸರ್ ರೂ. 95,000/-

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ECHS ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹುದ್ದೆಗೆ ಸಂಬಂಧಿಸಿದ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
  • ನಂತರ ಹುದ್ದೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾದ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ, ಅನುಭವ ವಿವರ ಸೇರಿದಂತೆ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ, ಶೈಕ್ಷಣಿಕ ಅಂಕಪಟ್ಟಿ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ.
  • ಅಗತ್ಯ ದಾಖಲೆಗಳನ್ನು ಒಳಗೊಂಡ ಅಪ್ಲಿಕೇಶನ್ ಫಾರ್ಮ್ ಅನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ.

ಅರ್ಜಿ ಸಲ್ಲಿಸುವ ವಿಳಾಸ:

OIC, ECHS ಸೆಲ್,

ಸ್ಟೇಷನ್ ಸೆಲ್, ಕಬ್ಬನ್ ರಸ್ತೆ, ಬೆಂಗಳೂರು – 560001

  • ಇಮೇಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ echscellbangalore@gmail.com ಇಮೇಲ್ ವಿಳಾಸಕ್ಕೆ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ಅರ್ಜಿ ಪರಿಶೀಲನೆ
  • ವೈಯಕ್ತಿಕ ಸಂದರ್ಶನ
  • ಕೌಶಲ್ಯ ಪರೀಕ್ಷೆ, ವ್ಯಾಪಾರ ಪರೀಕ್ಷೆ
  • ದಾಖಲಾತಿ ಪರಿಶೀಲನೆ
  • ಮೆರಿಟ್ ಪಟ್ಟಿ

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 14-10-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02-11-2026

Leave a Reply

Your email address will not be published. Required fields are marked *