October 25, 2026

**GSY: Pay ₹95 at Post Office & Get ₹14 Lakh! Open Your Account Directly on Mobile**

GSY: ಪೋಸ್ಟ್ ಆಫೀಸ್‌ನಲ್ಲಿ ₹95 ಕಟ್ಟಿದರೆ ₹14,00,000/- ಹಣ ಸಿಗುತ್ತೆ ! ಮೊಬೈಲ್ ನಲ್ಲೇ ಅಕೌಂಟ್ ಓಪನ್ ಮಾಡಿ

GSY: ನಮಸ್ಕಾರ ಸ್ನೇಹಿತರೆ, ದಿನಕ್ಕೆ ಕೇವಲ ₹95 ಕಟ್ಟುವ ಮೂಲಕ ₹14,00,000/- ವರೆಗೆ ಹಣವನ್ನು ಪಡೆಯಬಹುದಾದ ಯೋಜನೆಯ ಬಗ್ಗೆ ನಿಮಗೇನಾದರೂ ತಿಳಿದಿದೆಯಾ? ಇಲ್ಲವಾದರೆ ಈ ಒಂದು ಲೇಖನದ ಮೂಲಕ ಈ ಒಂದು ಉಳಿತಾಯ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ.

ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಭಾಗದ ಜನರಿಗಾಗಿಯೇ ಒಂದೊಳ್ಳೆಯ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಆ ಯೋಜನೆಯೇ ಗ್ರಾಮ ಸುಮಂಗಲ್ ಯೋಜನೆ. ಈ ಒಂದು ಯೋಜನೆಯು ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆಯ ಅಡಿಯಲ್ಲಿ ಬರುವ ಮನಿ ಬ್ಯಾಕ್ ಯೋಜನೆಯಾಗಿದೆ.

ಈ ಯೋಜನೆಯಡಿಯಲ್ಲಿ ಮಹಿಳೆಯರು, ರೈತರು, ಸ್ವಯಂ ಉದ್ಯೋಗಿಗಳು, ಗ್ರಾಮೀಣ ಭಾಗದ ಜನರು ಹಣವನ್ನು ಹೂಡಿಕೆ ಮಾಡಿ, ಹಣಕಾಸಿನ ಭದ್ರತೆಯ ಜೊತೆಗೆ ಸುರಕ್ಷತಾ ಜೀವ ವಿಮಾ ರಕ್ಷಣೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಏನಿದು ಗ್ರಾಮ ಸುಮಂಗಲ್ ಯೋಜನೆ? ಈ ಯೋಜನೆಯಡಿಯಲ್ಲಿ ಖಾತೆ ತೆರೆಯುವುದು ಹೇಗೆ? ಅಗತ್ಯ ದಾಖಲೆಗಳ ಯಾವುವು? ವಿಮಾ ಪಾಲಿಸಿ ಅವಧಿ ಎಷ್ಟು? ಈ ಯೋಜನೆಯ ವಿಶೇಷತೆ ಏನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ತಿಳಿದುಕೊಳ್ಳೋಣ.

ಗ್ರಾಮ ಸುಮಂಗಲ್ ಯೋಜನೆಯ ಅವಲೋಕನ:

ಯೋಜನೆಯ ಹೆಸರು ಗ್ರಾಮ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ
ಕನಿಷ್ಠ ವಿಮಾ ಮೊತ್ತ ರೂ. 10,000/-
ಗರಿಷ್ಟ ವಿಮಾ ಮೊತ್ತ ರೂ. 5,00,000/-
ಪಾಲಿಸಿ ಅವಧಿ 15 ವರ್ಷ ಅಥವಾ 20 ವರ್ಷ
ಪ್ರೀಮಿಯಂ ಪಾವತಿ ಆಯ್ಕೆಗಳು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಪಾವತಿ
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್ ಮೂಲಕ ಅಂಚೆಯಲ್ಲಿ

ಗ್ರಾಮ ಸುಮಂಗಲ್ ಯೋಜನೆ ಬಗ್ಗೆ:

ಗ್ರಾಮ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ ಎನ್ನುವುದು ಭಾರತ ಸರ್ಕಾರದ ಅಂಚೆ ಇಲಾಖೆಯು ಗ್ರಾಮೀಣ ಭಾಗದ ನಾಗರೀಕರ ಆರ್ಥಿಕ ಭದ್ರತೆ ಹಾಗೂ ನಿಯಮಿತ ಉಳಿತಾಯಕ್ಕಾಗಿ ಜಾರಿಗೆ ತಂದಿರುವ ಮನಿ ಬ್ಯಾಕ್ ವಿಮಾ ಯೋಜನೆಯಾಗಿದೆ. ಈ ಒಂದು ಯೋಜನೆಯಡಿಯಲ್ಲಿ ಕಡಿಮೆ ಪ್ರೀಮಿಯಂ ದರದಲ್ಲಿ ಗರಿಷ್ಟ ಬೋನಸ್ ನೀಡುವುವರ ಜೊತೆಗೆ ಪಾಲಿಸಿ ಅವಧಿ ಮುಗಿಯುದಕ್ಕಿಂತ ಮುಂಚಿತವಾಗಿ ನಿಗದಿತ ಅವಧಿಯಲ್ಲಿ ಹಣವನ್ನು ಹಿಂಪಡೆಯುವ ಅವಕಾಶವೂ ಇರುತ್ತದೆ.

ಈ ಯೋಜನೆಯಡಿಯಲ್ಲಿ ಪಾಲಿಸಿದಾರರು ರೂ. 4,00,000 ಮೌಲ್ಯ ಪಾಲಿಸಿಯನ್ನು ಆರಿಸಿಕೊಂಡರೆ, ದಿನಕ್ಕೆ ರೂ. 95 ಉಳಿತಾಯ ಮಾಡಬೇಕಾಗುತ್ತದೆ. ಪಾಲಿಸಿ ಅವಧಿ ಮುಗಿದ ನಂತರ ಪಾವತಿ ಮಾಡಿರುವ ರೂ. 4,00,000 ಹಣವನ್ನು ಹಿಂಪಡೆಯುವುದರ ಜೊತೆಗೆ ರೂ. 3,76,000/- ಬೋನಸ್ ಹಣವನ್ನು ಪಡೆದುಕೊಳ್ಳಬಹುದು.

ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಒಂದು ಯೋಜನೆಯು ಒಟ್ಟು ಎರಡು ಪಾಲಿಸಿ ಅವಧಿ ಹೊಂದಿದ್ದು, ಅವುಗಳೆಂದರೆ 15 ವರ್ಷ ಅಥವಾ 20 ವರ್ಷ. 15 ವರ್ಷಗಳ ಪ್ಲಾನ್ ಗಳಲ್ಲಿ ಪಾಲಿಸಿದಾರರು 6 ನೇ ವರ್ಷ, 9 ನೇ ವರ್ಷ ಹಾಗೂ 12 ನೇ ವರ್ಷಗಳ ಕೊನೆಯಲ್ಲಿ ತಲಾ ಒಟ್ಟು 20% ಹಣಗಳನ್ನು ಹಿಂಪಡೆಯಬಹುದು. ಹಾಗೂ 20 ವರ್ಷಗಳ ಪ್ಲಾನ್ ಗಳಲ್ಲಿ 8 ನೇ ವರ್ಷ, 12 ನೇ ವರ್ಷ ಹಾಗೂ 16 ನೇ ವರ್ಷದಲ್ಲಿ ತಲಾ 20% ಹಣಗಳನ್ನು ಹಿಂಪಡೆಯಬಹುದು. ಉಳಿದ ಹಣವನ್ನು ಮೆಚುರಿಟಿ ಅವಧಿ ಮುಗಿದ ನಂತರ ಹಿಂಪಡೆಯಬಹುದು ಹಾಗೂ ಇವುಗಳ ಜೊತೆಗೆ ಬೋನಸ್ ಹಣವು ಲಭ್ಯವಾಗುತ್ತದೆ.

ಗ್ರಾಮೀಣ ಭಾಗದ ಜನರಿಗೆ ಈ ಯೋಜನೆ ಹೇಗೆ ನೆರವಾಗಲಿದೆ?

  • ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನದಾಗಿ ಹೈನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ದರ್ಜೆ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇಂತಹ ಮಹಿಳೆಯರಿಗೆ ಹಣ ಉಳಿತಾಯ ಮಾಡಬಹುದಾದ ಯೋಜನೆಯನ್ನು ಪರಿಚಯಿಸಿದರೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜೊತೆಗೆ ತಮ್ಮ ಇಡೀ ಕುಟುಂಬಕ್ಕೆ ಭದ್ರವಾದ ಸುರಕ್ಷಾ ಕವಚವನ್ನು ಸಹ ನಿರ್ಮಿಸಬಹುದು.
  • ಗ್ರಾಮ ಸುಮಂಗಲ್ ಯೋಜನೆಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ನೇರ ನಿಯಂತ್ರಣದಲ್ಲಿ ಬರುವುದರಿಂದ ಗ್ರಾಮೀಣ ಭಾಗದ ಜನರು ಹೂಡಿಕೆ ಮಾಡಿದ ಪ್ರತಿಯೊಂದು ರೂಪಾಯಿಗೂ ಕೂಡ 100% ಗ್ಯಾರಂಟಿ ಇರುತ್ತದೆ.
  • ಗ್ರಾಮ ಸುಮಂಗಲ್ ಯೋಜನೆಯಡಿಯಲ್ಲಿ ಪ್ರಸ್ತುತ ವರ್ಷದಿಂದ ವಾರ್ಷಿಕ ರೂ. 1000/- ವಿಮಾ ಮೊತ್ತವನ್ನು ಕಟ್ಟಿದರೆ ರೂ. 47 ಬೋನಸ್ ನೀಡಲಾಗುತ್ತದೆ. ಇದು ಮಾರುಕಟ್ಟೆಯಲ್ಲಿರುವ ಇತರೆ ವಿಮೆಗಳಿಗಿಂತ ಹೆಚ್ಚಿದೆ.
  • ಪಾಲಿಸಿದಾರರು ಪಾಲಿಸಿ ಅವಧಿ ಮುಗಿಯುವ ಮುನ್ನವೇ ತನ್ನ ಆರ್ಥಿಕ ಅಗತ್ಯತೆಗಳಿಗಾಗಿ ನಿರ್ದಿಷ್ಟ ವರ್ಷಗಳ ಅಂತರದಲ್ಲಿ ನಿರ್ದಿಷ್ಟ ಹಣವನ್ನು ಹಿಂಪಡೆಯಬಹುದು.
  • ಗ್ರಾಮೀಣ ಭಾಗದ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ರೂ. 10,000/- ದಿಂದ ರೂ. 5,00,000/- ವರೆಗಿನ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
  • ಒಂದು ವೇಳೆ ಯಾವುದೇ ಪಾಲಿಸಿದಾರರ ಮರಣ ಹೊಂದಿದಿದ್ದರೆ, ಮರಣ ಹೊಂದುವ ಮುನ್ನ ಎರಡು ಮನಿ ಬ್ಯಾಕ್ ಕಂತುಗಳಲ್ಲಿ ಹಣವನ್ನು ಹಿಂಪಡೆದಿದ್ದರೂ ಸಹ ನಾಮಿನಿಗೆ ಅವರು ಆಯ್ಕೆ ಮಾಡಿಕೊಂಡಿರುವ ಪ್ಲಾನ್ ಗಳ ಸಂಪೂರ್ಣ ಹಣವನ್ನು ನೀಡಲಾಗುತ್ತದೆ.

ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಕಡ್ಡಾಯವಾಗಿ ಭಾರತ ಗ್ರಾಮೀಣ ಭಾಗದ ನಿವಾಸಿಯಾಗಿರಬೇಕು.
  • ಪಾಲಿಸಿದಾರರು ಕನಿಷ್ಠ 19 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • 15 ವರ್ಷಗಳ ಪ್ಲಾನ್ ಗಳಲ್ಲಿ ಆಯ್ಕೆ ಮಾಡಿಕೊಳ್ಳುವವರು ಗರಿಷ್ಟ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • 20 ವರ್ಷಗಳ ಪ್ಲಾನ್ ಗಳಲ್ಲಿ ಆಯ್ಕೆ ಮಾಡಿಕೊಳ್ಳುವವರು 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಫಲಾನುಭವಿಗಳು ಕನಿಷ್ಠ 10,000/- ದಿಂದ ಹಿಡಿದು ರೂ. 5,00,000/- ವರೆಗಿನ ವಿಮಾ ಮೊತ್ತದ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
  • ಗ್ರಾಮೀಣ ಭಾಗದ ಮಹಿಳೆಯರು, ರೈತರು, ಸಣ್ಣ ವ್ಯಾಪಾರಿಗಳು, ಸ್ವಂತ ಉದ್ಯೋಗಿಗಳು, ದಿನಗೂಲಿ ನೌಕರಉ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ವಯಸ್ಸಿನ ಪುರಾವೆ
  • ವಾಸಸ್ಥಳ ಪುರಾವೆ
  • ಪಾಸ್ ಪೋರ್ಟ್ ಸೈಜ್ ಫೋಟೋ
  • ನಾಮಿನಿಯ ದಾಖಲೆಗಳು
  • ಇತರೆ ಅಗತ್ಯ ದಾಖಲೆಗಳು

ಖಾತೆ ತೆರೆಯುವ ವಿಧಾನ:

  • ಗ್ರಾಮ ಸುಮಂಗಲ್ ಯೋಜನೆಯಡಿಯಲ್ಲಿ ಖಾತೆಯನ್ನು ತೆರೆಯಲು ಇಚ್ಚಿಸುವವರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಯನ್ನು ಸಂಪರ್ಕಿಸಿ.
  • ನಂತರ ಅಲ್ಲಿ ಗ್ರಾಮ ಸುಮಂಗಲ್ ಯೋಜನೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಕೇಳಿ ಪಡೆಯಿರಿ.
  • ನಂತರ ಅಪ್ಲಿಕೇಶನ್ ಫಾರ್ಮ್‌ ನಲ್ಲಿ ಕೇಳಲಾದ ವೈಯಕ್ತಿಕ ವಿವರ, ವಿಮಾ ಮೊತ್ತ ಮತ್ತು ನಾಮಿನಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  • ಆಧಾರ್ ಕಾರ್ಡ್, ವಯಸ್ಸಿನ ಪುರಾವೆ, ವಾಸಸ್ಥಳ ಪುರಾವೆ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ.
  • ನಿಗದಿತ ಸ್ಥಳಕ್ಕೆ ಪಾಸ್ ಪೋರ್ಟ್ ಸೈಜ್ ಫೋಟೋವನ್ನು ಅಂಟಿಸಿ.
  • ಅರ್ಜಿಯೊಂದಿಗೆ ಮೊದಲ ಕಂತು ಪಾವತಿಸಿ ಪಾಲಿಸಿ ಬಾಂಡ್ ಪಡೆಯಿರಿ. ಪ್ರೀಮಿಯಂ ಅನ್ನು ತಿಂಗಳಿಗೆ, 3 ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ಪಾವತಿಸಬಹುದು, ಇದರಲ್ಲಿ ನಿಮಗೆ ಅನುಕೂಲವಾಗುವ ಪ್ರೀಮಿಯಂ ಪಾವತಿ ಆಯ್ಕೆಯನ್ನು ಆರಿಸಿ.
  • ನಿಗದಿತ ಅವಧಿಗೆ ಪ್ರೀಮಿಯಂ ಹಣವನ್ನು ಪಾವತಿಸಿ.

ಕೊನೆಯ ಮಾತು:

ಗ್ರಾಮ ಸುಮಂಗಲ್ ಯೋಜನೆಯು ಗ್ರಾಮೀಣ ಜನರಿಗೆ ಉಳಿತಾಯದ ಜೊತೆಗೆ ಜೀವ ವಿಮಾ ರಕ್ಷಣೆ ಮತ್ತು ಮಧ್ಯಂತರ ಮನಿ-ಬ್ಯಾಕ್ ಸೌಲಭ್ಯ ನೀಡುವ ಯೋಜನೆಯಾಗಿದೆ. ಕಡಿಮೆ ಮೊತ್ತದಿಂದ ಪ್ರೀಮಿಯಂ ಪಾವತಿಸಿ ಭವಿಷ್ಯದ ಹಣಕಾಸಿನ ಅಗತ್ಯಗಳನ್ನು ಯೋಜಿಸಿಕೊಳ್ಳಲು ಈ ಯೋಜನೆ ಬಹಳಷ್ಟು ನೆರವಾಗಲಿದ್ದು, ಈ ಯೋಜನೆಯಡಿಯಲ್ಲಿ ಖಾತೆ ತೆರೆಯಲು ಇಚ್ಛಿಸುವ ಗ್ರಾಮೀಣ ಭಾಗದ ಜನರು ತಕ್ಷಣ ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ

Leave a Reply

Your email address will not be published. Required fields are marked *