Aadhar: ನಮಸ್ಕಾರ ಸ್ನೇಹಿತರೆ, ನೀವೇನಾದರೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು, ಮೊಬೈಲ್ ನಂಬರ್ ಹಾಗೂ ವಿಳಾಸವನ್ನು ಬದಲಾವಣೆ ಮಾಡಬೇಕೆಂದಿದ್ದೀರಾ? ಆದರೆ ಅದಕ್ಕಾಗಿ ಅಂಚೆ ಕಚೇರಿ ಎದುರು ಗಂಟೆ ಗಟ್ಟಲೆ ಕಾಯಬೇಕೆಂದು ಯೋಜನೆ ಮಾಡುತ್ತಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ಈ ವಿಷಯದ ಕುರಿತು ಚಿಂತಿಸುವ ಅಗತ್ಯ ಇಲ್ಲ.
ಭಾರತೀಯ ಗುರುತಿನ ಪ್ರಾಧಿಕಾರವು ಪ್ರಸ್ತುತ ಹೊಸ ಮಾರ್ಗಸೂಚಿಯನ್ನು ಪ್ರಕಟ ಮಾಡಿದ್ದು, ಆಧಾರ್ ತಿದ್ದುಪಡಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳ ಮಾಡಿದೆ. ಇದರನ್ವಯ ಇನ್ನು ಮುಂದೆ ಯಾರು ಕೂಡ ಆಧಾರ್ ತಿದ್ದುಪಡಿ ಮಾಡಿಸಲು ಕಚೇರಿಗೆ ಅಲೆದಾಡುವ ಅಗತ್ಯ ಇಲ್ಲ, ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಹೆಸರು, ಮೊಬೈಲ್ ನಂಬರ್ ಹಾಗೂ ವಿಳಾಸ ಸೇರಿದಂತೆ ಯಾವುದೇ ವಿವರಗಳನ್ನು ಬದಲಾವಣೆ ಮಾಡಿಕೊಳ್ಳಬಹುದು.
ಹಾಗಿದ್ದರೆ, ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಯಾವೆಲ್ಲ ವಿವರಗಳನ್ನು ಬದಲಾಯಿಸಬಹುದು? ಅದು ಹೇಗೆ? ಆಧಾರ್ ಕಾರ್ಡ್ ನ ಪ್ರಾಮುಖ್ಯತೆ ಏನು? ಆಧಾರ್ ತಿದ್ದುಪಡಿ ಮಾಡಿಸಲು ಅಗತ್ಯವಾದ ದಾಖಲೆಗಳು ಯಾವುವು? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.
ಪ್ರಮುಖ ಹೈಲೈಟ್ ಪಾಯಿಂಟ್ಸ್:
| * ಜನರು ಇನ್ನು ಮುಂದೆ ಆಧಾರ್ ತಿದ್ದುಪಡಿಗೆ ಯಾವುದೇ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ಸುಲಭವಾಗಿ ಮೊಬೈಲ್ ಮೂಲಕ ಆಧಾರ್ ತಿದ್ದುಪಡಿ ಮಾಡಿಕೊಳ್ಳಬಹುದು. * ಆಧಾರ್ ತಿದ್ದುಪಡಿ ಪ್ರಕ್ರಿಯೆ ಈಗ ಮತ್ತಷ್ಟು ಸರಳವಾಗಿದ್ದು, ಜನರ ಸಮಯ ಮತ್ತು ಹಣವನ್ನು ಉಳಿಸಲು ಸಹಾಯಕವಾಗಿದೆ. * ಗ್ರಾಮೀಣ ಪ್ರದೇಶದ ಜನರಿಗೂ ಆನ್ಲೈನ್ ಆಧಾರ್ ಸೇವೆಗಳು ಅನುಕೂಲಕರವಾಗಿದ್ದು, ಅನಗತ್ಯ ಪ್ರಯಾಣದ ವೆಚ್ಚವನ್ನು ಕಡಿಮೆಯಾಗಿದೆ. |
ಇನ್ನು ಮುಂದೆ ಆಧಾರ್ ತಿದ್ದುಪಡಿ ಮಾಡಿಸುವುದು ಸರಳ:
ಈ ಮೊದಲು ಯಾವುದೇ ವ್ಯಕ್ತಿ ತಮ್ಮ ಆಧಾರ್ ಕಾರ್ಡ್ ಗಳಲ್ಲಿ ಹೆಸರು, ವಿಳಾಸ, ಮೊಬೈಲ್ ನಂಬರ್ ಸೇರಿದಂತೆ ಯಾವುದೇ ವಿವರಗಳನ್ನು ಬದಲಾವಣೆ ಮಾಡಬೇಕಾದರೆ ಸಂಬಂಧಪಟ್ಟ ಕಚೇರಿಗೆ ಅಲೆದಾಡಬೇಕಾಗಿತ್ತು. ಇದರಿಂದ ಜನರ ವೆಚ್ಚ ಮತ್ತು ಸಮಯ ಬಹಳಷ್ಟು ವ್ಯರ್ಥವಾಗಿತ್ತು. ಆದರೆ ಭಾರತೀಯ ಗುರುತಿನ ಪ್ರಾಧಿಕಾರವು ಪ್ರಸ್ತುತ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಮೊಬೈಲ್ ಮೂಲಕವೇ ಆಧಾರ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಜನರ ಸಮಯ ಉಳಿತಾಯವಾಗುವುದರ ಜೊತೆಗೆ ಗ್ರಾಮೀಣ ಭಾಗದ ಜನರ ಪ್ರಯಾಣ ವೆಚ್ಚವು ಕಡಿಮೆಯಾಗುತ್ತದೆ. ಗ್ರಾಮೀಣ ಭಾಗದ ಜನರು ಆಧಾರ್ ತಿದ್ದುಪಡಿ ಮಾಡಿಸಲು ಒಂದು ದಿನದ ಕೆಲಸಕ್ಕೆ ರಜೆ ಮಾಡಬೇಕಾಗುವ ಪರಿಸ್ಥಿತಿ ಎದುರಾಗುವುದಿಲ್ಲ. ತಮಗೆ ಅನುಕೂಲವಾಗುವ ಸಮಯದಲ್ಲಿ ಸುಲಭವಾಗಿ ಮೊಬೈಲ್ ಮೂಲಕ ತಿದ್ದುಪಡಿ ಮಾಡಬಹುದು.
ಆಧಾರ್ ಕಾರ್ಡ್ ನ ಮಹತ್ವ:
ಆಧಾರ್ ಕಾರ್ಡ್ ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ನೀಡುವ ಆಧಾರ್ ಕಾರ್ಡ್ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುತ್ತದೆ. ಇದು ವ್ಯಕ್ತಿಯ ಗುರುತನ್ನು ದೃಢೀಕರಿಸಲು ಸಹಾಯ ಮಾಡುತ್ತದೆ. ಬ್ಯಾಂಕಿಂಗ್, ಸರ್ಕಾರಿ ಸೌಲಭ್ಯಗಳು ಮತ್ತು ವಿವಿಧ ಸೇವೆಗಳನ್ನು ಪಡೆಯುವ ಸಂದರ್ಭಗಳಲ್ಲಿ ಆಧಾರ್ ಉಪಯುಕ್ತವಾಗಿದೆ.
- ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ಪ್ರಮುಖ ದಾಖಲೆಗಳಾಗಿರುತ್ತದೆ:
ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು, ಪಿಂಚಣಿ, ವಿದ್ಯಾರ್ಥಿವೇತನ ಮತ್ತು ಇತರ ಸೌಲಭ್ಯಗಳನ್ನು ಪಡೆಯುವಾಗ ಸಂಬಂಧಿತ ನಿಯಮಗಳ ಪ್ರಕಾರ ಆಧಾರ್ ಅಗತ್ಯವಾಗಿದ್ದು. ಕೆಲವು ಯೋಜನೆಗಳಲ್ಲಿ ಫಲಾನುಭವಿಗಳ ಗುರುತನ್ನು ದೃಢೀಕರಿಸಲು ಇದು ಸಹಾಯ ಮಾಡುತ್ತದೆ.
- ಆಧಾರ್ ಕಾರ್ಡ್ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ:
ಆಧಾರ್ ಕಾರ್ಡ್ ವ್ಯಕ್ತಿಯ ಗುರುತನ್ನು ದೃಢೀಕರಿಸಲು ಬಳಸಬಹುದಾದ ದಾಖಲೆಯಾಗಿದೆ. ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳಲ್ಲಿ ಗುರುತಿನ ಪರಿಶೀಲನೆಗಾಗಿ ಇದನ್ನು ಬಳಸಲಾಗುತ್ತದೆ.
- ಬ್ಯಾಂಕಿಂಗ್ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಆಧಾರ್ ಅಗತ್ಯ:
ಬ್ಯಾಂಕ್ ಖಾತೆ ತೆರೆಯುವುದು, ಗ್ರಾಹಕರ ಗುರುತಿನ ಪರಿಶೀಲನೆ ಮತ್ತು ಕೆಲವು ಬ್ಯಾಂಕಿಂಗ್ ಸೇವೆಗಳಲ್ಲಿ ಆಧಾರ್ ಬಳಸಲಾಗುತ್ತದೆ. ಯಾವುದೇ ವ್ಯಕ್ತಿಗೆ ಯಾವುದೇ ಯೋಜನೆ ಅಥವಾ ವಿದ್ಯಾರ್ಥಿವೇತನ ಹಣವು ನೇರ ನಗದು ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮಾ ಆಗಬೇಕಾದರೆ ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯವಾಗಿರುತ್ತದೆ.
ಮೊಬೈಲ್ ನಲ್ಲಿ ಯಾವೆಲ್ಲ ವಿವರಗಳನ್ನು ಬದಲಾವಣೆ ಮಾಡಬಹುದು:
- ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಬದಲಾಯಿಸಿಕೊಳ್ಳಲು ಬಯಸುವ ಹಾಗೂ ಮೊಬೈಲ್ ನಂಬರ್ ಬದಲಾಯಿಸಲು ಬಯಸುವ ಅಭ್ಯರ್ಥಿಗಳು ಸುಲಭವಾಗಿ ಆನ್ಲೈನ್ ಮೂಲಕ ತಮ್ಮ ಮನೆಯಲ್ಲಿಯೇ ಮೊಬೈಲ್ ನಲ್ಲಿ ಈ ವಿವರಗಳನ್ನು ಬದಲಾವಣೆ ಮಾಡಿಕೊಳ್ಳಬಹುದು.
- ಆದರೆ, ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಮೊಬೈಲ್ ನಲ್ಲಿ ಬದಲಾಯಿಸಲು ಭಾರತೀಯ ಗುರುತಿನ ಪ್ರಾಧಿಕಾರವು ಅವಕಾಶ ಕಲ್ಪಿಸಿಲ್ಲ. ಹಾಗಾಗಿ ಈ ವಿವರಗಳನ್ನು ತಿದ್ದುಪಡಿ ಮಾಡಿಸಲು ಅಭ್ಯರ್ಥಿಗಳು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ಆಧಾರ್ ಕಾರ್ಡ್ ತಿದ್ದುಪಡಿಗೆ ಅಗತ್ಯವಾದ ದಾಖಲೆಗಳು:
- ವಿಳಾಸ ಪುರಾವೆ
- ಮತದಾರರ ಗುರುತಿನ ಚೀಟಿ
- ಪಡಿತರ ಚೀಟಿ
- ಭಾರತೀಯ ಪಾಸ್ಪೋರ್ಟ್
- ಚಾಲನಾ ಪರವಾನಗಿ
- ಇತ್ತೀಚಿನ ವಿದ್ಯುತ್, ನೀರು, ಅನಿಲ ಅಥವಾ ದೂರವಾಣಿ ಬಿಲ್
- ಗುರುತಿನ ಪುರಾವೆ:
- ಪ್ಯಾನ್ ಕಾರ್ಡ್
- ಭಾರತೀಯ ಪಾಸ್ಪೋರ್ಟ್
- ಮತದಾರರ ಗುರುತಿನ ಚೀಟಿ
- ಸರ್ಕಾರಿ ನೌಕರರ ಗುರುತಿನ ಚೀಟಿ
- ಶಾಲಾ ವರ್ಗಾವಣೆ ಪ್ರಮಾಣಪತ್ರ
- SSLC ಅಥವಾ PUC ಅಂಕಪಟ್ಟಿ
ಆಧಾರ್ ತಿದ್ದುಪಡಿ ಮಾಡುವ ವಿಧಾನ:
- ಆಧಾರ್ ತಿದ್ದುಪಡಿ ಮಾಡಿಸಲು ಬಯಸುವ ಅಭ್ಯರ್ಥಿಗಳು ಮೊದಲು ಮೈಆಧಾರ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮುಖಪುಟದಲ್ಲಿ ಕಾಣುವ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ 12 ಸಂಖ್ಯೆಯ ಆಧಾರ್ ಸಂಖ್ಯೆ ಹಾಗೂ ಕ್ಯಾಪ್ಚಾ ಕೋಡ್ ಎಂಟರ್ ಮಾಡಿ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ.
- ನಂತರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಬಂದಿರುವ ಒಟಿಪಿ ನಮೂದಿಸಿ ಅಲ್ಲಿ ಆಧಾರ್ ನವೀಕರಣದ ಸ್ಥಿತಿ ಪರಿಶೀಲಿಸುವ ಆಯ್ಕೆಯನ್ನು ಆರಿಸಿ ನೀವು ಯಾವ ವಿವರಗಳನ್ನು ಬದಲಿಸಬೇಕೋ ಆ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ಅಲ್ಲಿ ಕೇಳಲಾಗುವ ಎಲ್ಲ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಹಾಗೂ ಕೇಳಲಾಗುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಭರ್ತಿ ಮಾಡಿರುವ ವಿವರಗಳನ್ನು ಇನ್ನೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ.
- ಅರ್ಜಿ ಸಲ್ಲಿಸಿದಾಗ ದೊರೆತ ಸ್ವೀಕೃತಿ ಪತ್ರದಲ್ಲಿರುವ ನವೀಕರಣ ವಿನಂತಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಿ.
- ನಂತರ ಅಲ್ಲಿ ಕೇಳಲಾಗುವ ಇತರ ಮಾಹಿತಿಯನ್ನು ಭರ್ತಿ ಮಾಡಿ.
- ವಿವರಗಳನ್ನು ಸಲ್ಲಿಸಿದ ನಂತರ ನಿಮ್ಮ ಅರ್ಜಿಯು ಪರಿಶೀಲನೆಯಲ್ಲಿದೆಯೇ, ಅನುಮೋದನೆಯಾಗಿದೆಯೇ ಅಥವಾ ಇನ್ನಷ್ಟು ಕ್ರಮಗಳ ಅಗತ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಿ.
ಕೊನೆಯ ಮಾತು:
ಭಾರತೀಯ ಗುರುತಿಯ ಪ್ರಾಧಿಕಾರವು ಪ್ರಸ್ತುತ ವರ್ಷದಲ್ಲಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಆಧಾರ್ಗೆ ಸಂಬಂಧಿಸಿದ ಕೆಲವು ತಿದ್ದುಪಡಿಗಳನ್ನು ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ. ಇದರಿಂದ ಜನರ ಸಮಯ, ಹಣ ಮತ್ತು ಶ್ರಮ ಉಳಿತಾಯವಾಗುತ್ತದೆ. ಆಧಾರ್ ತಿದ್ದುಪಡಿ ಮಾಡಿಸಲು ಬಳಸುವ ಅಭ್ಯರ್ಥಿಗಳು ಇಂದೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.