October 24, 2026

KSRSS Recruitment 2026: Job Opportunities for SSLC, PUC, and Degree Holders! Last Date to Apply: November 2

ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಗೂಡ್ ನ್ಯೂಸ್! ಬೆಳಗಾವಿಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿರುವ ಪ್ರತಿಷ್ಠಿತ ಕ್ರಾಂತಿವೀರ ಸಂಗಳ್ಳಿ ರಾಯಣ್ಣ ಸೈನಿಕ ಶಾಲೆಯು ಖಾಲಿ ಇರುವ ವಿವಿಧ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ಆಫ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

KSRSS Recruitment 2026

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ತರಬೇತಿ ಪಡೆದ ಪದವೀಧರ ಶಿಕ್ಷಕರು, ಕರಕುಶಲ ಭೋದಕರು, ದೈಹಿಕ ಶಿಕ್ಷಣ ಬೋಧಕರು, ವಸತಿ ನಿಲಯ ಮೇಲ್ವಿಚಾರಕರು, ಸಂಗೀತ ಶಿಕ್ಷಕರು, ದಾಸ್ತಾನು ಮೇಲ್ವಿಚಾರಕರು, ಪಂಪ್ ನಿರ್ವಾಹಕರು ಸೇರಿದಂತೆ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಹುದ್ದೆಗೆ ಅನುಗುಣವಾಗಿ SSLC, PUC, ಸಂಬಂಧಿತ ವಿಭಾಗದಲ್ಲಿ ಪದವಿ, ಡಿಪ್ಲೊಮಾ ಹಾಗೂ ಬಿಎಡ್ ವಿದ್ಯಾರ್ಹತೆ ಹೊಂದಿರಬೇಕು.

ಹುದ್ದೆಗೆ ಅನುಗುಣವಾಗಿ 21 ವರ್ಷದಿಂದ 50 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,600/- ದಿಂದ ರೂ. 44,000/- ವರೆಗೆ ವೇತನವನ್ನು ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2-11-2026 ರೊಳಗೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಕಿರು ವಿಮರ್ಶೆ:

ನೇಮಕಾತಿ ಸಂಸ್ಥೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಂಗೊಳ್ಳಿ
ಹುದ್ದೆಯ ಹೆಸರು ಪದವೀಧರ ಶಿಕ್ಷಕರು, ಕರಕುಶಲ ಭೋದಕರು, ದೈಹಿಕ ಶಿಕ್ಷಣ ಬೋಧಕರು, ವಸತಿ ನಿಲಯ ಮೇಲ್ವಿಚಾರಕರು, ಸಂಗೀತ ಶಿಕ್ಷಕರು, ದಾಸ್ತಾನು ಮೇಲ್ವಿಚಾರಕರು, ಪಂಪ್ ನಿರ್ವಾಹಕರು, ಈಜು ತರಬೇತಿದಾರರು
ಹುದ್ದೆಯ ಸಂಖ್ಯೆ ಒಟ್ಟು 12 ಹುದ್ದೆಗಳು
ಉದ್ಯೋಗ ಸ್ಥಳ ಸಂಗೊಳ್ಳಿ, ಬೈಲಹೊಂಗಲ, ಬೆಳಗಾವಿ – ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2-11-2026

ಹುದ್ದೆಯ ಸಂಕ್ಷಿಪ್ತ ವಿವರ:

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಂಗೊಳ್ಳಿ ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಇಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ ಈ ಕೆಳಕಂಡಂತಿದೆ.

ಹುದ್ದೆಯ ವಿವರ ಹುದ್ದೆಗಳ ಸಂಖ್ಯೆ
ಈಜು ತರಬೇತುದಾರರು (ಮಹಿಳೆ) 1 ಹುದ್ದೆ
ಈಜು ತರಬೇತುದಾರರು (ಪುರುಷ) 1 ಹುದ್ದೆ
ದಾಸ್ತಾನು ಮೇಲ್ವಿಚಾರಕ (ತಾಂತ್ರಿಕ) 1 ಹುದ್ದೆ
ವಿದ್ಯುತ್ ತಜ್ಞ ಮತ್ತು ಪಂಪ್ ನಿರ್ವಾಹಕರು 1 ಹುದ್ದೆ
ಸಂಗೀತ ಶಿಕ್ಷಕರು 1 ಹುದ್ದೆ
ಕರಕುಶಲ ಬೋಧಕರು 1 ಹುದ್ದೆ
ತರಬೇತಿ ಪಡೆದ ಪದವೀಧರ ಶಿಕ್ಷಕರು (ವಿಜ್ಞಾನ) 1 ಹುದ್ದೆ
ತರಬೇತಿ ಪಡೆದ ಪದವೀಧರ ಶಿಕ್ಷಕರು (ಸಮಾಜ ವಿಜ್ಞಾನ) 2 ಹುದ್ದೆಗಳು
ದೈಹಿಕ ಶಿಕ್ಷಣಕ / ಕ್ರೀಡಾ ಭೋದಕರು 2 ಹುದ್ದೆಗಳು
ವಸತಿ ನಿಲಯ ಮೇಲ್ವಿಚಾಕರು 3 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಈಜು ತರಬೇತುಗಾರ:

ಈಜು ತರೆಬೇತುದಾರ ಮತ್ತು ಜೀವ ರಕ್ಷಕ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಹೊಂದಿರಬೇಕು. ಅಥವಾ ಜಿಲ್ಲಾ ಅಥವಾ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸರಬೇಕು.

  • ದಾಸ್ತಾನು ಮೇಲ್ವಿಚಾರಕ:

ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರಬೇಕು ಹಾಗೂ ಉಗ್ರಾಣ, ವಾಹನಗಳು, ಇಂಜಿನಿಯರಿಂಗ್ ಉಪಕರಣಗಳು, ಸರಬರಾಜು ನಿರ್ವಹಣೆ ಸಂಬಂಧಿತ ದಾಸ್ತಾನು ಜ್ಞಾನ ಹೊಂದಿರಬೇಕು.

  • ವಿದ್ಯುತ್ ತಜ್ಞ ಮತ್ತು ಪಂಪ್ ನಿರ್ವಾಹಕರು:

SSLC ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು ಹಾಗೂ ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ಪಾಲಿಟೆಕ್ನಿಕ್ ಸಂಸ್ಥೆಯಿಂದ ವಿದ್ಯುತ್ ಕೋರ್ಸ್ ಡಿಪ್ಲೊಮಾ ಹೊಂದಿರಬೇಕು.

  • ಸಂಗೀತ ಶಿಕ್ಷಕ:

ಸಂಗೀತವನ್ನು ಒಂದು ಮುಖ್ಯ ವಿಷಯವಾಗಿ ಓದಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಪಾಸ್ ಆಗಿರಬೇಕು.

  • ಕರಕುಶಲ ಬೋಧಕರು:

ಕನಿಷ್ಠ 50% ಅಂಕಗಳೊಂದಿಗೆ ಲಿಖಿತಕಲೆ ಪದವಿ ಹಾಗೂ ಕನಿಷ್ಠ 50% ಅಂಕಗಳೊಂದಿಗೆ ಬಿಎಡ್ ಪೂರ್ಣಗೊಳಿಸಿರಬೇಕು.

  • ತರಬೇತಿ ಪಡೆದ ಪದವೀಧರ ಶಿಕ್ಷಕರು (ಸಮಾಜ ವಿಜ್ಞಾನ ಹಾಗೂ ವಿಜ್ಞಾನ):

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 50% ಅಂಕಗಳೊಂದಿಗೆ ಸಂಬಂಧಿತ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ರಾಷ್ಟೀಯ ಶಿಕ್ಷಕರ ಶಿಕ್ಷಣ ಮಂಡಳಿ ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 50% ಅಂಕಗಳೊಂದಿಗೆ ಬಿಎಡ್ ತೇರ್ಗಡೆ ಹೊಂದಿರಬೇಕು.

  • ದೈಹಿಕ ಶಿಕ್ಷಣಕ / ಕ್ರೀಡಾ ಭೋದಕರು:

ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ದೈಹಿಕ ಶಿಕ್ಷಣ, ಕ್ರೀಡೆ ಅರ್ಹತಾ ಪ್ರಮಾಣಪತ್ರ ಹೊಂದಿರಬೇಕು.

  • ವಸತಿ ನಿಲಯ ಮೇಲ್ವಿಚಾರಕರು:

ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

ವಯೋಮಿತಿ ವಿವರ:

  • ವಸತಿ ನಿಲಯ ಮೇಲ್ವಿಚಾಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21 ವರ್ಷದಿಂದ ಗರಿಷ್ಟ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ದೈಹಿಕ ಶಿಕ್ಷಣ/ ಕ್ರೀಡೆ ಭೋದಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ತರಬೇತಿ ಪಡೆದ ಪದವೀಧರ ಶಿಕ್ಷಕರು, ಕರಕುಶಲ ಭೋದಕರು, ಸಂಗೀತ ಶಿಕ್ಷಕರು, ದಾಸ್ತಾನು ಮೇಲ್ವಿಚಾರಕರು, ಪಂಪ್ ನಿರ್ವಾಹಕರು, ಈಜು ತರಬೇತಿದಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 50 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ ವಿವರ:

ಸರ್ಕಾರದ ನಿಯಮಾವಳಿಗಳ ಪ್ರಕಾರ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕ:

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ರೂ. 350/-
  • ಸಾಮಾನ್ಯ ಮತ್ತು ಇತೆರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ. 500/-

ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ ಬಳಸಿ ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ.

ವೇತನ ಶ್ರೇಣಿ:

ಹುದ್ದೆಯ ವಿವರ ವೇತನ ಶ್ರೇಣಿ
ಈಜು ತರಬೇತುದಾರರು ರೂ. 21,600/-
ದಾಸ್ತಾನು ಮೇಲ್ವಿಚಾರಕ (ತಾಂತ್ರಿಕ) ರೂ. 21,600/-
ವಿದ್ಯುತ್ ತಜ್ಞ ಮತ್ತು ಪಂಪ್ ನಿರ್ವಾಹಕರು ರೂ. 21,600/-
ಸಂಗೀತ ಶಿಕ್ಷಕರು ರೂ. 21,600/-
ವಸತಿ ನಿಲಯ ಮೇಲ್ವಿಚಾಕರು ರೂ. 21,600/-
ದೈಹಿಕ ಶಿಕ್ಷಣಕ / ಕ್ರೀಡಾ ಭೋದಕರು ರೂ. 21,600/-
ಕರಕುಶಲ ಬೋಧಕರು ರೂ. 27,000/-
ತರಬೇತಿ ಪಡೆದ ಪದವೀಧರ ಶಿಕ್ಷಕರು (ವಿಜ್ಞಾನ) ರೂ. 44,000/-

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಹತಾ ಮಾನದಂಡವನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತ ಪಡಿಸಿಕೊಳ್ಳಿ.
  • ನಂತರ ಹುದ್ದೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಪಾಸ್ ಪೋರ್ಟ್ ಸೈಜ್ ಫೋಟೋ, ಶೈಕ್ಷಣಿಕ ದಾಖಲೆಗಳು, ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಸ್ವಯಂ ದೃಢೀಕರಣ ಪ್ರಮಾಣಪತ್ರ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  • ಎಲ್ಲ ಅಗತ್ಯ ದಾಖಲೆಗಳನ್ನು ಒಳಗೊಂಡ ಅಪ್ಲಿಕೇಶನ್ ಫಾರ್ಮ್ ಅನ್ನು ಒಂದು ಲಕೋಟೆಗೆ ಹಾಕಿ ಈ ಕೆಳಗೆ ತಿಳಿಸಿರುವ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಿ.

ಅರ್ಜಿ ಸಲ್ಲಿಸುವ ವಿಳಾಸ:

ಪ್ರಾಂಶುಪಾಲರು,

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,

ಅಂಚೆ: ಸಂಗೊಳ್ಳಿ ತಾಲ್ಲೂಕು, ಬೈಲಹೊಂಗಲ,

ಜಿಲ್ಲೆ: ಬೆಳಗಾವಿ, ಕರ್ನಾಟಕ, ಪಿನ್ ಕೋಡ್ – 591115

ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ಮತ್ತು ವಿದ್ಯಾರ್ಹತೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಅಂತಿಮ ಪರಿಶೀಲನೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
  • ಆಯ್ಕೆಯಾದ ಅಭ್ಯರ್ಥಿಗಳನ್ನು ಬೋಧನಾ ಪ್ರಾತ್ಯಕ್ಷಿಕೆ ಮಾತು ಸಂದರ್ಶನ ಅಥವಾ ಕೌಶಲ್ಯ ಪರೀಕ್ಷೆಗೆ ಕರೆಯಲಾಗುತ್ತದೆ.
  • ಸಂದರ್ಶನ ಹಾಗೂ ಪ್ರಾತ್ಯಕ್ಷಿಕೆ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ನೇಮಕಾತಿ ಅಧಿಸೂಚನೆ ಪ್ರಕಟವಾದ ದಿನಾಂಕ ಸೆಪ್ಟೆಂಬರ್ 2026
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2-11-2026

Leave a Reply

Your email address will not be published. Required fields are marked *